ಬಾಲಮಣಿಯಮ್ಮ
1909. ಮಲೆಯಾಳಮ್ ಕವಯಿತ್ರಿ. ನಾಲಪ್ಪಾಟ್ಟ್ ನಾರಾಯಣ ಮೇನೋನ್ ಅವರ ಸೋದರ ಸೊಸೆ. ಹುಟ್ಟಿದ್ದು ಪುನ್ನಯೂರ್ಕುಳಮಿನಲ್ಲಿ. ತಂದೆ ಚಿಟ್ಟ ಞ್ಞೂರ್ ಕುಞ್ಞಣ್ಣಿರಾಜಾ, ತಾಯಿ ಕೊಚ್ಚು ಅಮ್ಮ. ಇವರೇ ಹಿರಿಯ ಮಗಳು. ಇವರು ಶಾಲೆಗೆ ಹೋಗಿ ಕಲಿಯಲಿಲ್ಲ. ಮನೆಯಲ್ಲಿಯೇ ಸಂಸ್ಕøತ ಇಂಗ್ಲಿಷನ್ನು ಕಲಿತರು. ನಾಲಪ್ಪಾಟ್ಟ್ ಭವನದಲ್ಲಿ ಆಗಾಗ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದ ಇವರು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡರು. ಇವರ ಕವಿಹೃದಯ ಜಾಗೃತಗೊಂಡಿತು. ಹತ್ತೊಂಬತ್ತನೆಯ ವಯಸ್ಸಿನಲ್ಲಿ ವಿ.ಎಂ. ನಾಯರ್ ಎಂಬುವರೊಡನೆ ವಿವಾಹ ನೆರವೇರಿತು. ಪತಿಯೊಂದಿಗೆ ಕಲ್ಕತ್ತಾದಲ್ಲಿ ಬಹಳಷ್ಟು ಕಾಲ ವಾಸವಿದ್ದರು. ಪತಿಯ ಪ್ರೋತ್ಸಾಹದಿಂದಲೇ ಸೃಜನಶೀಲ ಸಾಹಿತ್ಯಕ್ಕೆ ಕೈ ಹಾಕಿ ಮಲಯಾಳಮ್ ಭಾಷೆಯ ಉತ್ತಮ ಕವಯಿತ್ರಿಯರಲ್ಲೊಬ್ಬರಾಗಿ ಬೆಳಗಿದರು.

ತ್ರಿಪ್ಪೂಣಿತ್ತುರ ಶಾಸ್ತ್ರ ಸದಸ್ಸು 1963ರಲ್ಲಿ ಇವರಿಗೆ ಸಾಹಿತ್ಯ ನಿಪುಣಿನಿ ಎಂಬ ಬಿರುದನ್ನು ನೀಡಿತು. 1963ರಲ್ಲಿ ಕೇಂದ್ರ ಸಆಹಿತ್ಯ ಅಕಾಡೆಮಿ ಇವರ ಮುತ್ತಶ್ಶಿ ಗ್ರಂಥಕ್ಕೆ ಪುರಸ್ಕಾರ ಕೊಟ್ಟಿತು. ಇವರ ಹಿರಿಯಮಗಳು ಮಾಧವಿಕುಟ್ಟಿ (ಕಮಲಾದಾಸ್) ಕೂಡ ಲೇಖಕಿ. ಮಗ ಮೋಹನ್‍ದಾಸ್ ಸಾಹಿತಿ.

ಇವರ ಪ್ರಮುಖ ಕೃತಿಗಳು: 1 ಕೂಪ್ಪುಕೈ 2. ಅಮ್ಮ 3. ಕುಟುಂಬಿನಿ 4. ಧರ್ಮಮಾರ್ಗತ್ತಿಲ್ 5. ಸ್ತ್ರೀ ಹೃದಯಮ್ 6. ಪ್ರಣಾಮಮ್ 7. ಮುತ್ತಶ್ಶಿ 8. ಲೋಕಾಂತರಂಙಳಿಲ್ 9. ಮ¾ುವಿಂಡೆ ಕಥ 10. ಪ್ರಭಾಂಕುರಂ 11. ಅವರ್ ಪಾಡುನ್ನು 12. ಅಂಬಲತ್ತಿಲ್

ವಿಶ್ವಮಾನವನ ಹೃದಯಸ್ಪಂದನ ಇವರ ಕವಿತೆಗಳಲ್ಲಿ ಕೇಳಿಬರುತ್ತದೆ. 				(ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ